Thursday, November 01, 2007

ಯಾರಿಗೆ ಬೇಕ್ರೀ ಕನ್ನಡ

ನವೆಂಬರ್ ಒಂದು ಬಂದ್ರೆ ಕನ್ನಡುದ್ ಬಗ್ಗೆ ಯಾವ್ದಾದ್ರ್ ಒಂದ್ ಬರ್ದು ಹಾಕ್ದಿದ್ರೆ ತಿಂದುಂಡ್ ಅನ್ನ ಜೀರ್ಣ ಆಗೋದಿಲ್ಲಪ್ಪೋ. ಮಿಕ್ಕಿದ್ ದಿನ ಏನಾದ್ರೂ ಎಕ್ಕುಟ್ಟೋಗ್ಲೀ ನಮ್ಗೆಲ್ಲಾ ನವೆಂಬರ್ ಒಂದ್ ಮಾತ್ರ ಕನ್ನಡದ್ ನೆನ್ಪು ಬತ್ತೈತೆ. ಹಂಗಾಗಿ ಬ್ಲಾಗಿಗೆ ಏನಾದ್ರೂ ಬರುದ್ ಹಾಕ್ಬೇಕಂತ ಯೋಚ್ನೆ ಬಂತು. ಟೇಮಿಗ್ ಕರೆಕ್ಟಾಗಿ ಬರ್ಯೋಕೆ ತಲೆ ಓಡ್ಬೇಕಲ್ಲಾ... ಊಹುಂ... ಯಾವಾಗ್ಲೋ ಕಾಲೇಜ್ ಕಿಲಾಸಿಗ್ ಹೋಗ್ತಿದ್ದಾಗ ಬರ್ದಿದ್ನಲ್ಲಾ ಅದುನ್ನೇ ಹಾಕ್ಬುಟ್ಟು ಕೈತೊಳ್ಕೊಂಡ್ ಬುಟ್ಟೆ...


ಕನ್ನಡ ಕನ್ನಡ
ಅಂತ ಕನವರಿಸಿದ್ರ
ಕೇಳ್ತಾರ
ಯಾಕೆ ಸ್ವಾಮಿ ಕನ್ನಡ?
ಯಾರಿಗೆ ಸ್ವಾಮಿ ಕನ್ನಡ?

ಓದೋ ಹೈಕ್ಳಿಗೆ
ಬೇಕ್ರೀ ಕನ್ನಡ
ಅಂತಂದ್ರ ಹೇಳ್ತಾರ
ಇಂಗ್ಲೀಷ್‌ನ ಎಬಿಸಿಡಿ
ಬರ್ತಾದ್ರಿ 'ಬೈ ಹಾರ್ಟು'
ಕನ್ನಡದ ಅಆಇಈ
ಕೊಡ್ತಾದ್ರಿ 'ಹಾರ್ಟ್ ಬ್ರೇಕು'

ಪ್ರೀತಿಯ ಸವಿನುಡಿಗೆ
ಬೇಕ್ರೀ ಕನ್ನಡ
ಅಂತಂದ್ರ ಹೇಳ್ತಾರ
ಇಂಗ್ಲೀಷ್‌ನ ಹೌ ಆರ್ ಯೂ
ಛಲೋ ಇದ್ರ
ಕನ್ನಡದಾಗ್ಯಾಕ್ರೀ
ಚೆನ್ನಾಗಿದ್ದೀರಾ

ಈ ನೆಲದ ಗುಣ
ಕನ್ನಡ ಅಂತಂದ್ರ
ಹೇಳ್ತಾರ ಗುಟ್ನಾಗ
ಇಂಗ್ಲೀಷ್ ಮ್ಯಾಲ್ ಕಾಣೋ
ಗಗನ ಕಣ್ರೀ
ಕನ್ನಡ ಕೆಳಗ್ ಕಾಣೋ
ನೆಲ ಮಾತ್ರ ಕಣ್ರೀ
ನಾವೆಲ್ಲಾ ಏರ್ಬೇಕ ಮ್ಯಾಲ
ಬ್ಯಾಗ್ ಹತ್ರಿ ಹತ್ರೀ

3 Comments:

Blogger ಮಲ್ಲಿಕಾಜು೯ನ ತಿಪ್ಪಾರ said...

En sir.. Blog nam Kannada sarathy anta Ittkondu..yarige bekrii kananda ant keltidiri alla.. Idu nyava???

8:05 AM  
Blogger jomon varghese said...

ಸ್ವಾಮಿ ನೀವು ಕನ್ನಡ ಸಾರಥಿಯೋ ಅಥವಾ ತಮಿಳು ಸಾರಥಿಯೋ ಅಂತ ಸಂಶಯ ಬರುತ್ತಿದೆ..


ತಮಿಳು ಸಿನಿಮಾವೊಂದರ ಕುರಿತು ಪುಟಗಟ್ಟಲೆ ಬರೆಯುವ ನೀವು ಕನ್ನಡ ರಾಜ್ಯೋತ್ಸವದೆಂದು ನಾಲ್ಕು ಸಾಲುಗಳ ಮಕ್ಕಳ ಕವನ ಬರೆದು ಈ ರೀತಿ ಅಸಡ್ಡೆ ಮಾಡುವುದು ಸರಿಯೇ?

ರಾಜ್ಯೋತ್ಸವದ ದಿನದಂದು ನಿಮ್ಮ ಬ್ಲಾಗಿನಲ್ಲಿ ಉತ್ತಮ ಲೇಖನ ನಿರೀಕ್ಷಿಸಿದ್ದೆವು. ಆದರೆ ನಿರಾಶೆ ಮಾಡಿದಿರಿ. ಕನ್ನಡ ಯಾರಿಗೆ ಬೇಕ್ರೀ ಅಂತ ಕೇಳಿದ್ದೀರಲ್ಲಾ? ನಿಮಗೆ ಅನ್ನ ನೀಡುತ್ತಿರುವ ಭಾಷೆ ಅದು. ಅಭಿಮಾನ ಇಲ್ಲದಿದ್ದರೂ, ಅವಹೇಳನ ಸಲ್ಲ.

2:45 PM  
Blogger Haaru Hakki said...

ಯಾರಿಗೆ ಬೇಕ್ರಿ ಕನ್ನಡ ಅಂತ ಪ್ರಶ್ನೆ ಮಾಡಿಯೇ ಕವನ ರಚಿಸಿದ್ದೀರಾ? ಚೆನ್ನಾಗಿ ಮೂಡಿಬಂದಿದೆ.
ಬೆಂಗಳೂರಿಗೆ ಹೋದ್ರೆ ನೀವು ಹಾದಿರೋ ಹಾಡಿಗೆ ತುಂಬಾ ಸಾಮ್ಯತೆ ಇದೆ ಅನ್ಸುತ್ತೆ ಸಾರ್.

ಬ್ರಹ್ಮಾನಂದ್

2:29 PM  

Post a Comment

<< Home