ಬ್ರಾ ಬ್ರಾ ಬ್ರಾ ಸೈಪ್ರಸ್ 'ಬ್ರಾ'ಖಲೆ
ಸೈಪ್ರಸ್ ದ್ವೀಪದ ಮಹಿಳೆಯರು 1 ಲಕ್ಷದ 15 ಸಾವಿರ ಬ್ರಾಗಳನ್ನು ಕಲೆಹಾಕಿ ವಿಶ್ವದಾಖಲೆ ಮಾಡಿದ್ದಾರಂತೆ. ಆ ಬ್ರಾಗಳು ಒಟ್ಟು 111 ಕಿಲೋಮೀಟರು ಉದ್ದವಿವೆಯಂತೆ. ಮಹಿಳೆಯರ ಮಾನಮಿಡಿಯುವ ಈ ಬ್ರಾಖಲೆಯ ಆಮೋಧ ದೃಶ್ಯವನ್ನು ನೋಡಲು ಎಷ್ಟು ಸಂಖ್ಯೆಯಲ್ಲಿ ಗಂಡಸರು ದಾಪುಗಾಲು ಹಾಕುತ್ತಿದ್ದಾರೆಂಬುದನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ.
ಒಂದು ಮೂಲದ ಪ್ರಕಾರ, ಬ್ರಾಗಳನ್ನು ತ್ಯಜಿಸಿ ವಿಬ್ರಾವಸ್ತ್ರಿತರಾದ ಅಂಗನೆಯರನ್ನು ನೋಡಿ ಪಾವನರಾಗುವ ಹೆಬ್ಬಯಕೆಯಿಂದ ವಿಶ್ವಾದ್ಯಂತದಿಂದ ಗಂಡಸರು ಆ ಬ್ರಾವನದತ್ತ ಓಡೋಡಿಬರುತ್ತಿದ್ದಾರೆನ್ನಲಾಗಿದೆ. ಪ್ರವಾಸಿಗಳ ಬರದಿಂದ ತತ್ತರಿಸುತ್ತಿದ್ದ ಸೈಪ್ರಸ್ ದ್ವೀಪ ಒಮ್ಮಿಂದೊಮ್ಮೆಲೇ ಕಳೆಗಟ್ಟಿ ನಿಂತಿದೆ ಎಂದು ಬ್ರಾದರ್ಶಿಗಳು ಹೇಳಿರುವುದು ವರದಿಯಾಗಿದೆ.
ಸ್ತನ ಕ್ಯಾನ್ಸರ್ ವಿರುದ್ಧದ ಪ್ರಚಾರಕ್ಕಾಗಿ ಈ ಬ್ರಾ ದಾಖಲೆಯನ್ನು ಮಾಡಲಾಯಿತೆಂದು ನೈಜ ವರದಿ ಹೇಳಿರುವುದಾದರೂ ಅನೈಜ ವರದಿಗಳಿಂದ ಬೇರೊಂದು ಸಂಗತಿ ಬೆಳಕಿಗೆ ಬಂದಿದೆ. ಆ ದ್ವೀಪದಲ್ಲಿನ ಗಂಡಸರೆಲ್ಲರೂ ವಿ'ಬ್ರಾ'ವಿತ ಹೆಣ್ಣುಗಳನ್ನು ಹ(ಅ)ರಸುವ ಕೆಲಸದಲ್ಲೇ ನಿರತವಾಗಿ ಕಾಲಹರಣ ಮಾಡುತ್ತಿದ್ದುದರಿಂದ ದೇಶದ (ಹಾಗೂ ಕುಟುಂಬದ) ಉತ್ಪಾದನಾ ವಲಯಕ್ಕೆ ತೀವ್ರ ಧಕ್ಕೆ ಒದಗಿಬಂದಿತ್ತಂತೆ. ಅದಕ್ಕಾಗಿ ಅಲ್ಲಿನ ಸರಕಾರ ಮತ್ತು ಮಹಿಳೆಯರ ನಡುವೆ ಮಾತ'ಕತೆ' ನಡೆದು ಒಂದು ತೀರ್ಮಾನಕ್ಕೆ ಬಂದರೆನ್ನಲಾಗಿದೆ. ಆ ತೀರ್ಮಾನದ ಪ್ರಕಾರ ಮಹಿಳೆಯರು ತಮ್ಮ ತೀರಾ ಮಾನವನ್ನು ಕೊಂಚ ಕಡಿತಗೊಳಿಸುವ ಮೂಲಕ, ಅಂದರೆ, ತಮ್ಮ ಬ್ರಾ ಅನ್ನು ತ್ಯಜಿಸುವ ಮೂಲಕ ವಿ'ಬ್ರಾ'ವಿತರಾಗಬೇಕು. ಇದರಿಂದ ಕಂಡಕಂಡಲ್ಲಿ ವಿಬ್ರಾಂಗನೆಯರು ಸಿಗುವುದರಿಂದ ಪುರುಷರು ವಿಬ್ರಾಂಗನೆಯರನ್ನು ಕಷ್ಟಪಟ್ಟು ಹುಡುಕುವ ಕೆಲಸ ತಪ್ಪುತ್ತದೆ.
ಬ್ರಾವನ ವೀಕ್ಷಿಸಲು ಬರುತ್ತಿರುವ ಕಾಮ'ಕೋಟಿ' ಗಂಡಸರನ್ನು ಮಾತನಾಡಿಸಿದಾಗ, ಇಂತಹ ಅಪ'ರೂಪ'ದ ದಾಖಲೆಯನ್ನು ನಿರ್ಮಿಸಿದ ಮಾನಿನಿಯರಿಗೆ ಪ್ರೋತ್ಸಾಹ ನೀಡಲು ಬಂದಿರುವುದಾಗಿ ತಿಳಿಸಿದ್ದಾರೆ. ತಮ್ಮ ದೇಶಗಳಲ್ಲಿ ತೊಟ್ಟುಕೊಳ್ಳಲು ಬ್ರಾ ಇಲ್ಲದೆ ಮಾನಕಳೆದುಕೊಂಡಿದ್ದ ಹೆಣ್ಣು ಮಕ್ಕಳಿಗಾಗಿ ಬ್ರಾಗಳನ್ನು ಕೊಂಡೊಯ್ಯುವುದಾಗಿ ಹೇಳಿದ್ದಾರೆ. ಅಲ್ಲದೆ ತಮ್ಮ ದೇಶದ ಅನೇಕ ಹೆಂಗಸರು ಮೇಲ್ವಸ್ತ್ರ ಕೊಳ್ಳಲು ಕಾಸಿಲ್ಲದೆ ಚಿಂದಿ ಬಟ್ಟೆ ಉಟ್ಟೇ ಮಾನ ಮುಚ್ಚಿಕೊಳ್ಳುತ್ತಿದ್ದಾರೆ. ಅವರಿಗೋಸ್ಕರ ನೀವುಗಳು ಮೇಲ್ವಸ್ತ್ರಗಳನ್ನೂ ತ್ಯಜಿಸಿ ದಾನ ಮಾಡಬೇಕೆಂದು ಸೈಪ್ರಸ್ ದ್ವೀಪದ ಹೆಂಗಳೆಯರಿಗೆ ಕೋರಿಕೆ ಸಲ್ಲಿಸುವುದಾಗಿಯೂ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
4 Comments:
ಏನು ಭಾರಿ ಕಿಲಾಡಿತನ ತೋರಾಕ್ ಹತ್ತೀರೀ...?
ಸೈಪ್ರಸ್ ಜನ ಬ್ರಾಗಳನ್ನು ಜೋಡಿಸಿದ್ದು ನಮ್ ಭಾರತೀಯ ಚಿತ್ರರಂಗದ ಹೀರೋಯಿನ್ ಗಳಿಗೆ ಕೊಡಲೆಂದು ಸ್ವಾಮೀ... ಅಷ್ಟೂ ತಿಳಿಯಲಿಲ್ವೆ?
ಭಾರತೀಯ ಚಿತ್ರಗಳ ಹೀರೋಯಿನ್ ಗಳ ದುಸ್ಥಿತಿ ನೋಡಿ ಸಹಿಸಲಾರದೆ ಅವರು ಅವೆಲ್ಲವುಗಳನ್ನು ಒಟ್ಟುಗೂಡಿಸಿ ಹೊಲಿದು ಎಂದು ಪೂರ್ತಿ ಬಟ್ಟೆ ಮಾಡುವ ಯೋಚನೆ ಇದೆ ಅಂತ ಕೇಳಿ ಬಲ್ಲೆ.
ಸೈಪ್ರಸ್ ಗೆ ಸಕಲೇಶಪುರದ ಸುಬ್ರಾಯಭಟ್ಟನ ಸವಾರಿ!
ಅಷ್ಟೇ ಅಲ್ಲ, ಕೋಳಿಕೆರಂಗ ಹಾಡಿದಂತೆ,
"ನಾನು ಸು ಬ್ರಾ ಯ ಭ ಟ್ಟ... ಸುನು 'ಬ್ರಾ'ನು ಯನು ಭನು ಟನು ಒತ್ತು ಟ..." ಎಂಬ ಹಾಡು ಬೇರೆ!
ಸ್ವಾಮಿ ಅನ್ವೇಷ್ ಜೀ, ನಮ್ಮ ಹೀರೋಯಿನ್ ಗಳು ಸರ್ವವಸ್ತ್ರ ಪರಿತ್ಯಾಗಿಗಳು. ಯಾವುದೇ ಮುಚ್ಚುಮರೆ ಇಲ್ಲದ ಅಂತಹ ತ್ಯಾಗಮಣಿಗಳಿಗೆ ನೀವು ಅಸಡ್ಡೆ ತೋರುವುದನ್ನು ನಾನು ಕಟುವಾಗಿ ವಿರೋಧಿಸುತ್ತೇನೆ. 8+(
ವಿಚಿತ್ರಾನ್ನದ ತಯಾರಕರೇ, ಸುಬ್ರಾಯಭಟ್ಟರನ್ನು ಸೈಪ್ರಸ್ಸಿಗೆ ಕಳಿಸಬ್ಯಾಡ್ರೀ. ಅಲ್ಲಿ ಜನರ ನೂಕುನುಗ್ಗುಲೋ ನುಗ್ಗುಲು. ಇವರು ಸುನು ಬ್ರಾ ನು ಎಂದು ಹೇಳಿ ಟ ಒತ್ತು ನೀಡುವಷ್ಟರಲ್ಲಿ ಜನರು ಅಟ್ಟಿಬಿಟ್ಟಾರು!!
Post a Comment
<< Home