ಮರಳಿ ಮಣ್ಣಿಗೆ
ಹಳ್ಳಿಯಲ್ಲಿ ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಿದ್ದ ವ್ಯಕ್ತಿ ಇಂದು ನಗರದಲ್ಲಿ ಅತ್ಯಾಧುನಿಕ ಟೂತ್ ಬ್ರಷ್, ಪೇಸ್ಟ್‌ನಿಂದ ಹಲ್ಲುಜ್ಜುತ್ತಿದ್ದಾನೆ. ನಗರದಲ್ಲಿ ಅತ್ಯಾಧುನಿಕ ಟೂತ್ ಬ್ರಷ್, ಪೇಸ್ಟ್ ನಿಂದ ಹಲ್ಲುಜ್ಜುತ್ತಿದ್ದ ವ್ಯಕ್ತಿ ಇಂದು ನಗರ ಹೊರಹೊಲಯದ ಗುಡಿಸಲಿನಲ್ಲಿ ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಿದ್ದಾನೆ.
ವಿಶಾಲವಾದ ಜಗತ್ತು ಸಂಕುಚಿತವಾಗುತ್ತಿದೆ. ಸಂಕುಚಿತವಾಗಿದ್ದ ಜಾಗತಿಕ ಅವಕಾಶಗಳು ವಿಶಾಲವಾಗುತ್ತಿವೆ. ಇದು ಜಾಗತೀಕರಣದ ಪ್ರತಿಫಲ. ಹಾಗೆಯೇ ಮೇಲೆ ಹೇಳಿದ ಬೇವಿನ ಕಡ್ಡಿ ಅಂಶವೂ ಜಾಗತೀಕರಣ ಅಥವಾ ಆಧುನೀಕರಣದ ಪ್ರತಿಫಲವೇ ಹೌದು.
ಮನುಷ್ಯ ಎಷ್ಟೇ ಮುಂದುವರೆದರೂ ಎಷ್ಟೇ ಬದಲಾದರೂ ಅವನ ರಕ್ತ, ಮಾಂಸ ಎಂದಿಗೂ ಬದಲಾಗುವುದಿಲ್ಲ. ಹಾಗೆಯೇ ಮನುಷ್ಯನಿಗೆ ಸುಖ, ಸಂತೋಷ, ಮನರಂಜನೆ ಕೂಡ ಮೂಲಭೂತ ಅಂಶಗಳು. ಹಿಂದಿನ ಕಾಲದಲ್ಲಿ ಮನರಂಜನೆಗಾಗಿ ಹಾಡು ನೃತ್ಯಗಳು ಇದ್ದವು. ಭರತನಾಟ್ಯವಿತ್ತು, ಜಾನಪದ ನೃತ್ಯಗಳಿದ್ದವು, ಯಕ್ಷಗಾನ, ಕೋಲಾಟ, ದೊಡ್ಡಾಟ ಇದ್ದವು ಈಗಲೂ ಇವೆ. ಆದರೆ ಈಗ ಸಿನೆಮಾ ಸಂಗೀತವಿದೆ, ಪಾಪ್ ರಾಕು ಎಂದು ಪಾಶ್ಚಾತ್ಯ ಸಂಗೀತಗಳಿವೆ. ಈ ಸಂಗೀತಗಳು ಒದಗಿಸುತ್ತಿರುವ ಮನರಂಜನೆಯನ್ನೇ ಹಿಂದಿನ ಕಾಲದ ಸಂಗೀತಗಳು ಒದಗಿಸುತ್ತಿದ್ದವು. ರಾಕ್ ಆಡಿಗೆ ತಲೆ ಹೊಯ್ದಾಡುವ ಮಂದಿಯಂತೆ ಹಿಂದುಸ್ತಾನಿ ಸಂಗೀತಕ್ಕೂ ಜನ ತಲೆ ಆಡಿಸುತ್ತಾರೆ. ಮನರಂಜನೆ ಎಂಬುದು ಮಾನಸಿಕ ದೃಷ್ಟಿಕೋನದ ಮೇಲೆ ಹೋಗುವುದರಿಂದ ಆಧುನಿಕ ಸಂಗೀತ, ಪುರಾತನ ಸಂಗೀತಗಳ ಮನರಂಜನಾ ಉದ್ದೇಶದಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ಹಾಗೆಯೇ ಮನುಷ್ಯನ ಸುಖ ಸಂತೋಷಗಳೂ ಕೂಡ ಮಾನಸಿಕ ದೃಷ್ಟಿಕೋನದ ಮೇಲೆ ಅವಲಂಬಿತವಾಗಿದೆ. ದಿನಕ್ಕೆ ಐವತ್ತು ರೂಪಾಯಿ ದಿನಗೂಲಿ ಸಂಪಾದಿಸುವ ಕೂಲಿಗೆ ಇರುವಷ್ಟೇ ಕಷ್ಟಕಾರ್ಪಣ್ಯಗಳು ಸಾವಿರ ರೂಪಾಯಿ ಸಂಪಾದಿಸುವ ಅಧಿಕಾರಿಯಲ್ಲೂ ಇರುತ್ತವೆ. ಇಲ್ಲಿ ಸುಖ ದುಃಖಗಳು ಇಬ್ಬರಲ್ಲೂ ಬೇರೆ ಬೇರೆಯವೇ ಆದರೂ ಮೂಲಭೂತ ಅಂಶಗಳು ಒಂದೇ. ಸೈಕಲ್ ಹೊಂದಿರುವ ಬಡವನೊಬ್ಬ ತನಗೆ ಒಂದು ಮೊಪೆಡ್ ಇಲ್ಲವೆಂದು ವ್ಯಥೆ ಅನುಭವಿಸುತ್ತಿರುತ್ತಾನೆ. ಕಾರ್ ಹೊಂದಿರುವ ಆ ಅಧಿಕಾರಿ ತನಗೆ ಸ್ವಂತ ಹೆಲಿಕಾಪ್ಟರ್ ಹೊಂದುವುದಕ್ಕಾಗುತ್ತಿಲ್ಲವಲ್ಲ ಎಂದು ಚಿಂತೆಪಡುತ್ತಿರುತ್ತಾನೆ. ಇಬ್ಬರ ಸುಖ ದುಃಖಗಳ ಪರಿಣಾಮದಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ಈ ವಿಚಾರ ಮನಸಿನಲ್ಲಿ ಮಿಂಚಿ ಮರೆಯಾದದ್ದು ನಾಗೇಶ್ ಹೆಗಡೆ ಅವರು ಕನ್ನಡಪ್ರಭದಲ್ಲಿ ಬರೆದ "ಬಡತನದ ಆಧುನೀಕರಣ" ಲೇಖನ ಓದಿನ ಓದಿದ ಮೇಲೆ.