Saturday, June 10, 2006

ಮರಳಿ ಮಣ್ಣಿಗೆ

ಹಳ್ಳಿಯಲ್ಲಿ ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಿದ್ದ ವ್ಯಕ್ತಿ ಇಂದು ನಗರದಲ್ಲಿ ಅತ್ಯಾಧುನಿಕ ಟೂತ್ ಬ್ರಷ್, ಪೇಸ್ಟ್‌ನಿಂದ ಹಲ್ಲುಜ್ಜುತ್ತಿದ್ದಾನೆ. ನಗರದಲ್ಲಿ ಅತ್ಯಾಧುನಿಕ ಟೂತ್ ಬ್ರಷ್, ಪೇಸ್ಟ್ ನಿಂದ ಹಲ್ಲುಜ್ಜುತ್ತಿದ್ದ ವ್ಯಕ್ತಿ ಇಂದು ನಗರ ಹೊರಹೊಲಯದ ಗುಡಿಸಲಿನಲ್ಲಿ ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಿದ್ದಾನೆ.

ವಿಶಾಲವಾದ ಜಗತ್ತು ಸಂಕುಚಿತವಾಗುತ್ತಿದೆ. ಸಂಕುಚಿತವಾಗಿದ್ದ ಜಾಗತಿಕ ಅವಕಾಶಗಳು ವಿಶಾಲವಾಗುತ್ತಿವೆ. ಇದು ಜಾಗತೀಕರಣದ ಪ್ರತಿಫಲ. ಹಾಗೆಯೇ ಮೇಲೆ ಹೇಳಿದ ಬೇವಿನ ಕಡ್ಡಿ ಅಂಶವೂ ಜಾಗತೀಕರಣ ಅಥವಾ ಆಧುನೀಕರಣದ ಪ್ರತಿಫಲವೇ ಹೌದು.

ಮನುಷ್ಯ ಎಷ್ಟೇ ಮುಂದುವರೆದರೂ ಎಷ್ಟೇ ಬದಲಾದರೂ ಅವನ ರಕ್ತ, ಮಾಂಸ ಎಂದಿಗೂ ಬದಲಾಗುವುದಿಲ್ಲ. ಹಾಗೆಯೇ ಮನುಷ್ಯನಿಗೆ ಸುಖ, ಸಂತೋಷ, ಮನರಂಜನೆ ಕೂಡ ಮೂಲಭೂತ ಅಂಶಗಳು. ಹಿಂದಿನ ಕಾಲದಲ್ಲಿ ಮನರಂಜನೆಗಾಗಿ ಹಾಡು ನೃತ್ಯಗಳು ಇದ್ದವು. ಭರತನಾಟ್ಯವಿತ್ತು, ಜಾನಪದ ನೃತ್ಯಗಳಿದ್ದವು, ಯಕ್ಷಗಾನ, ಕೋಲಾಟ, ದೊಡ್ಡಾಟ ಇದ್ದವು ಈಗಲೂ ಇವೆ. ಆದರೆ ಈಗ ಸಿನೆಮಾ ಸಂಗೀತವಿದೆ, ಪಾಪ್ ರಾಕು ಎಂದು ಪಾಶ್ಚಾತ್ಯ ಸಂಗೀತಗಳಿವೆ. ಈ ಸಂಗೀತಗಳು ಒದಗಿಸುತ್ತಿರುವ ಮನರಂಜನೆಯನ್ನೇ ಹಿಂದಿನ ಕಾಲದ ಸಂಗೀತಗಳು ಒದಗಿಸುತ್ತಿದ್ದವು. ರಾಕ್ ಆಡಿಗೆ ತಲೆ ಹೊಯ್ದಾಡುವ ಮಂದಿಯಂತೆ ಹಿಂದುಸ್ತಾನಿ ಸಂಗೀತಕ್ಕೂ ಜನ ತಲೆ ಆಡಿಸುತ್ತಾರೆ. ಮನರಂಜನೆ ಎಂಬುದು ಮಾನಸಿಕ ದೃಷ್ಟಿಕೋನದ ಮೇಲೆ ಹೋಗುವುದರಿಂದ ಆಧುನಿಕ ಸಂಗೀತ, ಪುರಾತನ ಸಂಗೀತಗಳ ಮನರಂಜನಾ ಉದ್ದೇಶದಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಹಾಗೆಯೇ ಮನುಷ್ಯನ ಸುಖ ಸಂತೋಷಗಳೂ ಕೂಡ ಮಾನಸಿಕ ದೃಷ್ಟಿಕೋನದ ಮೇಲೆ ಅವಲಂಬಿತವಾಗಿದೆ. ದಿನಕ್ಕೆ ಐವತ್ತು ರೂಪಾಯಿ ದಿನಗೂಲಿ ಸಂಪಾದಿಸುವ ಕೂಲಿಗೆ ಇರುವಷ್ಟೇ ಕಷ್ಟಕಾರ್ಪಣ್ಯಗಳು ಸಾವಿರ ರೂಪಾಯಿ ಸಂಪಾದಿಸುವ ಅಧಿಕಾರಿಯಲ್ಲೂ ಇರುತ್ತವೆ. ಇಲ್ಲಿ ಸುಖ ದುಃಖಗಳು ಇಬ್ಬರಲ್ಲೂ ಬೇರೆ ಬೇರೆಯವೇ ಆದರೂ ಮೂಲಭೂತ ಅಂಶಗಳು ಒಂದೇ. ಸೈಕಲ್ ಹೊಂದಿರುವ ಬಡವನೊಬ್ಬ ತನಗೆ ಒಂದು ಮೊಪೆಡ್ ಇಲ್ಲವೆಂದು ವ್ಯಥೆ ಅನುಭವಿಸುತ್ತಿರುತ್ತಾನೆ. ಕಾರ್ ಹೊಂದಿರುವ ಆ ಅಧಿಕಾರಿ ತನಗೆ ಸ್ವಂತ ಹೆಲಿಕಾಪ್ಟರ್ ಹೊಂದುವುದಕ್ಕಾಗುತ್ತಿಲ್ಲವಲ್ಲ ಎಂದು ಚಿಂತೆಪಡುತ್ತಿರುತ್ತಾನೆ. ಇಬ್ಬರ ಸುಖ ದುಃಖಗಳ ಪರಿಣಾಮದಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಈ ವಿಚಾರ ಮನಸಿನಲ್ಲಿ ಮಿಂಚಿ ಮರೆಯಾದದ್ದು ನಾಗೇಶ್ ಹೆಗಡೆ ಅವರು ಕನ್ನಡಪ್ರಭದಲ್ಲಿ ಬರೆದ "ಬಡತನದ ಆಧುನೀಕರಣ" ಲೇಖನ ಓದಿನ ಓದಿದ ಮೇಲೆ.

Saturday, June 03, 2006

ಶಾಯರಿ ಶಾಯರಿ ಇದು ಫನಾ ಕಣ್ರೀ

ತೇರೇ ದಿಲ್ ಮೇಂ ಮೇರಿ ಸಾನ್ಸೋಂ ಕೋ ಪನಾಹ್ ಮಿಲ್ ಜಾಯೇಂ
ತೇರಿ ಇಶ್ಕ್ ಮೇಂ ಮೇರಿ ಜಾನ್ ಫನಾ ಹೋ ಜಾಯೇಂ


ಆಮೀರ್ ಖಾನ್, ಕಾಜೋಲ್ ಅಭಿನಯದ "ಫನಾ" ಚಿತ್ರವನ್ನು ಇತ್ತೀಚೆಗೆ ನೋಡಿದೆ. ಅದರಲ್ಲಿರುವ ಕೆಲವು ಶಾಯರಿಗಳು ನನ್ನ ಗಮನ ಸೆಳೆದವು. ಗಮನ ಸೆಳೆದದ್ದೇಕೆಂದರೆ ಚಿತ್ರ ನೋಡುವಾಗ ಆ ಶಾಯರಿಗಳು ಸರಿಯಾಗಿ ಅರ್ಥವಾಗಲಿಲ್ಲ. ಅರ್ಥ ಯಾಕಾಗಲಿಲ್ಲ ಎಂದರೆ ನನಗೆ ಹಿಂದಿ ಸರಿಯಾಗಿ ಬರುವುದಿಲ್ಲ. ಆದರೂ ನನಗೆ ಶಾಯರಿಗಳೆಂದರೆ ಇಷ್ಟ. ಏಕೆಂದರೆ ಅವುಗಳಲ್ಲಿರುವ ಲಯ ನನ್ನನ್ನು ಭಾವುಕನನ್ನಾಗಿಸುತ್ತದೆ.

ಇ-ಮೇಲ್‌ನಲ್ಲಿ ಕೆಲವು ಶಾಯರಿಗಳು ಬಂದಿದ್ದವು. ನನ್ನ ಪ್ರವಾಸೀ ತಾಣಗಳಲ್ಲಿ ಒಂದಾದ ಚಿತ್ರಮ್ಮನವರ ಬ್ಲಾಗಿನಲ್ಲಿ ಮಿಕ್ಕ ಶಾಯರಿಗಳು ಸಿಕ್ಕಿದವು. ಸ್ಪಷ್ಟವಾಗಿ ಇವುಗಳ ಅರ್ಥ ನನಗೆ ಗೊತ್ತಿಲ್ಲ. ಅವನ್ನು ಯಥಾವತ್ ಕನ್ನಡದಲ್ಲಿ ಹಾಕಿದ್ದೇನೆ. ಹಿಂದಿ ನನಗೆ ಸರಿಯಾಗಿ ಗೊತ್ತಿಲ್ಲದಿರುವುದರಿಂದ ಅಕ್ಷರ ದೋಷಗಳಿರಬಹುದು ಹಾಗೂ ಅವುಗಳಿಂದಾಗಿ ಅರ್ಥಗಳಲ್ಲಿಯೂ ತಪ್ಪುಗಳಿರಬಹುದು.


ಬೇಕುದೀ ಕೀ ಜಿಂದಗೀ ಹಮ್ ಜಿಯಾ ನಹೀಂ ಕರ್ತೇ
ಯೂನ್ ಕಿಸೀಕಾ ಜಾಮ್ ಹಮ್ ಪಿಯಾ ನಹೀಂ ಕರ್ತೇ
ಉನ್ಸೇ ಕೆಹದೋ ಮೊಹಬ್ಬತ್ ಕಾ ಇಸಾರ್ ಆಕರ್ ಖುದ್ ಕರೇಂ
ಯೂನ್ ಕಿಸೀಕಾ ಪೀಚಾ ಹಮ್ ಕಿಯಾ ನಹೀಂ ಕರ್ತೇ

ಫೂಲ್ ಹೂಂ ಗುಲಾಬ್ ಕಾ
ಚಮೇಲಿ ಕಾ ಮತ್ ಸಮಜ್ನಾ
ಆಶಿಕ್ ಹೂಂ ಆಪುಕಾ
ಅಪನೀ ಸಹೇಲಿ ಕಾ ಮತ್ ಸಮಜ್ನಾ

ಆಯ್ ಕುದಾ ಆಜ್ ಯೇ ಫೈಸಲಾ ಕರದೇ
ಉಸೇ ಮೇರಾ ಯಾ ಮುಜೇ ಉಸ್ಕಾ ಕರದೇ
ಬಹುತ್ ದುಃಖ್ ಸಾಹೇ ಹೈ ಮೈನೆ
ಕೋಯಿ ಖುಸಿ ಅಬ್ ತೋ ಮುಖದ್ದರ್ ಕರದೇ
ಬಹುತ್ ಮುಶ್ಕಿಲ್ ಲಗ್ತಾ ಹೈ ಉಸ್ ಸೇ ದೂರ್ ರೆಹ್ನಾ
ಜುದಾಯಿ ಕೆ ಸಫರ್ ಕೋ ಕಮ್ ಕರದೇ
ಜಿತನಾ ದೂರ್ ಚಲೇ ಗಯೇ ವೋಹ್ ಮುಜಸೇ
ಉನಸೇ ಉತ್ನಾ ಕರೀಬ್ ಕರದೇ
ನಹೀಂ ಲಿಖಾ ಅಗರ್ ನಸೀಬ್ ಮೇಂ ಉಸ್ಕಾ ನಾಮ್
ತೋ ಖತಂ ಕರ ಯೇ ಜಿಂದಗಿ ಔರ್ ಮುಜೆ ಫನಾ ಕರದೇ

ತೇರೇ ದಿಲ್ ಮೇಂ ಮೇರಿ ಸಾನ್ಸೋಂ ಕೋ ಪನಾಹ್ ಮಿಲ್ ಜಾಯೇಂ
ತೇರಿ ಇಶ್ಕ್ ಮೇಂ ಮೇರಿ ಜಾನ್ ಫನಾ ಹೋ ಜಾಯೇಂ

ಆಂಕೇಂ ತೋ ಪ್ಯಾರ್ ಮೇ ದಿಲ್ ಕೀ ಜುಬಾನ್ ಹೋತೀ ಹೈ
ಸಚ್ಚೀ ಚಾಹತ್ ತೋ ಸದಾ ಬೇಜುಬಾನ್ ಹೋತೀ ಹೈ
ಪ್ಯಾರ್ ಮೇಂ ದರ್ದ್ ಬೀ ಮಿಲೇ ತೋ ಕ್ಯಾ ಘಬರಾನಾ
ಸುನಾ ಹೈ ದರ್ದ್ ಸೆ ಚಾಹತ್ ಔರ್ ಜವಾನ್ ಹೋತೀ ಹೈ

ದೂರ್ ಹಮ್ಸೇ ಜಾ ಪಾವೋಗೆ ಕೈಸೆ
ಹಮಕೋ ಭೂಲ್ ಪಾವೋಗೆ ಕೈಸೆ
ಹಮ್ ವೋ ಖುಶಬೂ ಜೋ ಸಾನ್ಸೋಂ ಮೇ ಉತರ್ ಜಾಯೇಂ
ಖುದ್ ಅಪನೀ ಸಾನ್ಸೋಂ ಕೋ ರೋಕ್ ಪಾವೋಗೆ ಕೈಸೆ

ರೋನೇ ದೇ ತು ಆಜ್ ಹಮಕೋ ತು ಆಂಕೇ ಸುಜಾನೇ ದೇ
ಬಾಹೋಂ ಮೇ ಲೇಲೆ ಔರ್ ಖುದ್ ಕೋ ಭೀಗ್ ಜಾನೆ ದೇ
ಹೈ ಜೋ ಸೀನೆ ಮೇಂ ಕ್ವಾಯಿದ್ ದಾರಿಯಾ ವೋ ಚೂಟ್ ಜಾಯೇಗಾ
ಹೈ ಇತನಾ ದರ್ದ್ ಕೀ ತೇರಾ ದಾಮನ್ ಭೀಗ್ ಜಾಯೇಗಾ
ಅದೂರಿ ಸಾನ್ಸ್ ಥೀ ಧಡಕನ್ ಅದೂರಿ ಥೀ ಅದೂರೇಂ ಹಮ್
ಮಗರ್ ಅಬ್ ಚಾಂದ್ ಪೂರಾ ಹೈ ಫಲಕ್ ಪೆ
ಔರ್ ಅಬ್ ಪೂರೇ ಹೈಂ ಹಮ್


ಅರ್ಧಂಬರ್ಧ ಅರ್ಥವಾದ ಒಂದು ಶಾಯರಿಯನ್ನು ಕನ್ನಡೀಕರಿಸಲು ಪ್ರಯತ್ನಿಸಿದೆ. ಅದರ ಫಲ ಈ ಕೆಳಗಿನದು...

ನಾನು ಒಂದು ಗುಲಾಬಿ ಹೂ
ಆದರೆ ಮಲ್ಲಿಗೆ ಎಂದೆಣಿಸಬೇಡ
ನಾನು ನಿನ್ನ ಪ್ರೇಮಿ
ಆದರೆ ಗೆಳತಿ ಎಂದೆಣಿಸಬೇಡ


ಹೆಚ್ಚಿನ ಸ್ಪೂರ್ತಿಗೆ ದುಂಡಿರಾಜ್ ಅವರ ಕವನಗಳಿಗೆ ಮೊರೆ ಹೋಗಬೇಕಾಗಿದೆ. ಅಲ್ಲಿಯವರೆಗೆ ಐ ವಿಲ್ ಹ್ಯಾವ್ ಎ ನೈಸ್ ವೀಕೆಂಡ್.