Saturday, December 22, 2007

ಸಾನಿಯಾ ಯಾಕೆ ಇಷ್ಟ?

ಸಾನಿಯಾ ಮಿರ್ಜಾ ನಿಮಗಿಷ್ಟವಾಗುವುದು ಯಾವ ವಿಷಯದಲ್ಲಿ? ಇದಕ್ಕೆ ಉತ್ತರ ನೀಡುವುದು ತುಸು ಕಷ್ಟಕರವೇ. ಸಾನಿಯಾಳನ್ನು ಇಷ್ಟಪಡುವ ಎಷ್ಟು
ಮಂದಿಗೆ ಟೆನಿಸ್ ಆಟ ಗೊತ್ತಿದೆ? ಬಹುಶಃ ಕನಿಷ್ಠ ಕಾಲುಭಾಗದಷ್ಟು ಮಂದಿಗೆ ಟೆನಿಸ್ ಆಟ ಸಂಪೂರ್ಣ ಗೊತ್ತಿರಲಿಕ್ಕಿಲ್ಲ. ಆದರೂ ಭಾರತೀಯರು
ಸಾನಿಯಾಳನ್ನು ಬಹುವಾಗಿ ಇಷ್ಟಪಡುತ್ತಾರೆ. ಸುತ್ತಿಬಳಸಿ ಹೇಳುವ ಬದಲು ಇಲ್ಲಿ ನೇರವಾಗಿ ಹೇಳುವುದು ಒಳ್ಳೆಯದು. ಸಾನಿಯಾಳ ಮಾದಕ ರೂಪು
ಆಕೆಯ ಟೆನಿಸ್ ಆಟಕ್ಕಿಂತ ಹೆಚ್ಚು ಜನಪ್ರಿಯ ಎಂಬುದು ನಿರ್ವಿವಾದ. ಹಾಗೆಂದು ಸಾನಿಯಾಳ ಟೆನಿಸ್ ಸಾಧನೆಯನ್ನು ಕೇವಲವಾಗಿ ಕಾಣುವಂತಿಲ್ಲ.
ಟೆನಿಸ್‌ನಲ್ಲಿ ಯಶಸ್ಸು ಗಳಿಸದಿದ್ದರೆ ಆ ಕ್ಷೇತ್ರದಲ್ಲಿ ಆಕೆ ಚಾಲನೆಯಲ್ಲಿರುವುದಿಲ್ಲ. ಆಕೆ ಚಾಲನೆಯಲ್ಲಿಲ್ಲದಿದ್ದರೆ ಆಕೆಯ ಸೌಂದರ್ಯ ಬೆಳಕಿಗೆ ಬರುವುದಿಲ್ಲ.
ಮಹಿಳಾ ಕ್ರೀಡಾಪಟುಗಳ ವಿಷಯ ಬಂದಾಗ ಸಾಧನೆ ಮತ್ತು ಸೌಂದರ್ಯಗಳೆರಡೂ ಬೆರೆತರೆ ಮಾತ್ರ ಜನಪ್ರಿಯತೆಯ ಶೃಂಗ ಏರಲು ಸಾಧ್ಯ. ಈಗ ಈ
ವಿಷಯ ಪ್ರಸ್ತಾಪ ಮಾಡಲು ಕಾರಣ ಗೂಗಲ್‌ನವರು ನೀಡಿದ ವರದಿ.

ಅಂತರ್ಜಾಲದಲ್ಲಿ ಮಾಹಿತಿ ಹುಡುಕುವ ಕಾರ್ಯಕ್ಕೆ ಗೂಗಲ್‌ನವರ ಸರ್ಚ್ ಎಂಜಿನ್ ವಿಶ್ವದಲ್ಲೇ ಅತ್ಯಂತ ಜನಪ್ರಿಯ. ಭಾರತದಿಂದ ಜನರು ಮಾಹಿತಿ
ಶೋಧಿಸಿದ ವಿವರಗಳನ್ನು ಗೂಗಲ್ ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ಸಾನಿಯಾಳದ್ದು ಅಗ್ರ ಸ್ಥಾನ. ಅಂದರೆ, ಮಾಹಿತಿ ಶೋಧಿಸಿದ ಭಾರತೀಯರಲ್ಲಿ
ಅತೀ ಹೆಚ್ಚು ಜನರು ಸಾನಿಯಾಳ ಬಗ್ಗೆ ಶೋಧಿಸಿದ್ದಾರೆ. ಇದು 2007 ವರ್ಷಕ್ಕಾಗಿಯ ವರದಿ. ಕಳೆದ ವರ್ಷದಲ್ಲೂ ಸಾನಿಯಾಳೇ ಅಗ್ರಸ್ಥಾನ ಪಡೆದಿದ್ದಳು. ಆರಂಭದಲ್ಲಿ ನಾನು ಹೇಳಿದ ಸೌಂದರ್ಯ, ಸಾಧನೆ ಮತ್ತು ಜನಪ್ರಿಯತೆಯ ತರ್ಕಕ್ಕೆ ಪುಷ್ಟಿ ನೀಡುವುದು ರಷ್ಯನ್ ಟೆನಿಸ್ ತಾರೆ ಮಾರಿಯಾ ಶರಾಪೋವಾ. ಆಕೆಯ ಮೈಮಾಟ ಟೆನಿಸ್ ಪ್ರೇಮಿಗಳಿಗೆ ತಿಳಿದದ್ದೇ. ಇಂತಹ ಶರಾಪೋವಾ ಕೂಡ ಪಟ್ಟಿಯಲ್ಲಿ ಉಚ್ಚ ಸ್ಥಾನ ಪಡೆದಿದ್ದಾಳೆ. ಆದೇ... ಬೆಲ್ಜಿಯಂನ ಬಲಿಷ್ಠ ಟೆನಿಸ್ ಪಟು ಜಸ್ಟಿನ್ ಹೆನಿನ್ ಅವರ ಬಗ್ಗೆ ಹುಡುಕಲು ಮುಂದಾದವರ ಸಂಖ್ಯೆ ನಗಣ್ಯ. ಏಕೆಂದರೆ ಹೆನಿನ್ ಅವರದ್ದು ಮಾದಕ ಮೈಮಾಟವಲ್ಲ. ಟೆನಿಸ್‌ನಲ್ಲಿ ಬಹಳ ದಿನಗಳಿಂದ ಉತ್ತಮ ಸಾಧನೆ ತೋರದೆ ಹಿಂದುಳಿದಿರುವ ಆನಾ ಕೋರ್ನಿಕೋವಾ ಮಾತ್ರ ಕ್ರೀಡಾ ಶೋಧಕರ ಕುತೂಹಲ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಂದರೆ ಇದರರ್ಥ, ತುಂಡುಡುಗೆ ತೊಟ್ಟು ಆಡುವ ಆಟಗಾರ್ತಿಯರ ದೇಹ ಸಿರಿ ವೀಕ್ಷಿಸಲು ಅವರ ಚಿತ್ರಗಳನ್ನು ನೋಡುವುದರಲ್ಲಿ ಅಂತರ್ಜಾಲಿಗಳು ದಂಬಾಲು ಬೀಳುತ್ತಾರೆ.

ಗೂಗಲ್‌ನವರು ಶೋಧಕರ ಮಾಹಿತಿಯನ್ನು ವಿವಿಧ ವಿಭಾಗವಾಗಿ ವಿಭಜಿಸಿ ಪ್ರಕಟಿಸಿದ ಪಟ್ಟಿಯ ವಿವರ ಕೆಳಗಿದೆ ನೋಡಿ:

2007 ರಲ್ಲಿ ಬಹಳ ಏರುಗತಿಯಲ್ಲಿ ಶೋಧನೆ ಕಂಡ ವಿಷಯಗಳು -

ಓರ್ಕುಟ್ (Orkut)
ಯೂಟ್ಯೂಬ್ (ಲಕ್ಷಾಂತರ ಚಿತ್ರಗಳು ಈ ತಾಣದಲ್ಲಿ ಲಭ್ಯ)
ಜಿಮೇಲ್ (ಗೂಗಲ್‌ನವರ ಇಮೇಲ್)
ನಕ್ಷೆ (ಪ್ರವಾಸಿಗರ ಕುತೂಹಲ)
ಗೂಗಲ್
ಭಾರತೀ ರೇಲ್ವೆ (ಬಹುಶಃ ಆನ್‌ಲೈನ್ ರೇಲ್ವೆ ಬುಕಿಂಗ್‌ಗಾಗಿ ಇರಬಹುದು)
ಯಾಹೂ ಮೇಲ್ (ಗೂಗಲ್‌ನಲ್ಲಿ ಯಾಹೂ ಮೇಲ್ ಶೋಧ... ಆಶ್ಚರ್ಯ)
ತಂತ್ರಜ್ಞಾನ (ಅಂತರ್ಜಾಲ ಬಳಕೆದಾರರು ಹೆಚ್ಚಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿರುವುದು ಇದಕ್ಕೆ ಕಾರಣ)
ಯಾಹೂ (!!)
ಜಪಕ್ (Zapak - ಗೂಗಲ್‌ನ ಮತ್ತೊಂದು ಪ್ರತಿಸ್ಪರ್ಧಿ)

ಹಳೆಯ ಸ್ನೇಹಿತರನ್ನು ಅರಸಲು, ಹೊಸ ಸ್ನೇಹಿತರನ್ನು ಹಿಡಿಯಲು, ಮಾಡಬಾರದ ಕೆಲಸ ಮಾಡಲು, ಟೈಂ ಪಾಸ್ ಮಾಡಲು ಈಗ ಇರುವ ಜನಪ್ರಿಯ ಮಾರ್ಗವೆಂದರೆ ಓರ್ಕುಟ್... ಈ ಓರ್ಕುಟ್ ಎಂಬುದು ಗೂಗಲ್‌ನವರದ್ದೇ ಒಂದು ಪ್ರಾಡಕ್ಟ್. ಇದು ಅಗ್ರ ಸ್ಥಾನ ಪಡೆದಿರುವುದು ಆಶ್ಚರ್ಯವಲ್ಲ.


ಗೂಗಲ್‌ನಲ್ಲಿ ಹುಡುಕಾಟದ ವಸ್ತುವಾದ ಬಾಲಿವುಡ್ ತಾರೆಯರ ಅಗ್ರ ಹತ್ತು ಮಂದಿಯ ಪಟ್ಟಿ-

ಐಶ್ವರ್ಯ ರೈ (ವಾವ್... ಬೆಕ್ಕಿನ ಕಣ್ಣಿನ ಸುಂದರಿ ಮದುವೆಯಾದರೂ ಕುಂದದ ಜನಪ್ರಿಯತೆ - ಹುಡುಗರ ಶೋಧಕ್ಕೆ ಬಲಿ)
ಸಲ್ಮಾನ್ ಖಾನ್ (ಬಹುಶಃ ಬಾಡಿ ಮೋಡಿಗೆ ಒಳಗಾದ ಕನ್ಯೆಯರು ಕಾರಣ)
ಹೃತಿಕ್ ರೋಷನ್ (ಮೂರನೇ ಸ್ಥಾನ... ಆಶ್ಚರ್ಯ)
ಕತ್ರೀನಾ ಕೈಫ್ (ಲಂಬೂ ಸೆಕ್ಸೀ ಮಾಡೆಲ್ - ಮೇಲೇರದಿದ್ದರೆ ಹೇಗೆ)
ಶಾರುಕ್ ಖಾನ್ (ಚಕ್ ದೇ ಇಂಡಿಯಾ ಎಂದು ಕೂಗಿದ ಮರುಹೊತ್ತಿನಲ್ಲೇ ಓಂ ಶಾಂತಿ ಓಂ ಎಂದು ಹೇಳಿ ಬಾಡಿ ಬಿಲ್ಡ್ ಮಾಡಿದ ಅಪ್ರತಿಮ ಭಾದಶಾ)
ಮಲ್ಲಿಕಾ ಶೆರಾವತ್ (ಇನ್ನೂ ಜನಪ್ರಿಯತೆಯಲ್ಲಿರುವ ಅಗುದೀ ಸೆಕ್ಸೀ ನಟಿ)
ಪ್ರಿಯಾಂಕ ಚೋಪ್ರಾ (ಹೇಳದಿರುವುದಕ್ಕೆ ಏನಿದೆ)
ಕರೀನಾ ಕಪೂರ್ (ಈಕೆ ಕೆಳಭಾಗಕ್ಕೆ ಬಂದದ್ದು ಆಶ್ಚರ್ಯ)
ರಾಣಿ ಮುಖರ್ಜಿ (ಪರವಾಗಿಲ್ಲ... ಬಾಲಿವುಡ್ ಸೆಕ್ಸಿ ಬೆಡಗಿಯರ ಮಧ್ಯೆ ಈಕೆ ಸ್ಥಾನ ಪಡೆದುಕೊಂಡಿದ್ದಾಳಲ್ಲ)
ದೀಪಿಕಾ ಪಡುಕೋಣೆ (ಎಂತಹ ಗಂಡೆದೆಯೂ ಈಕೆಗೆ ಹೃದಯ ಒಪ್ಪಿಸದೇ ಇರಲಾರ ಎಂಬುದು ಈಗಿನ ಆಡುನುಡಿ)

ಅತೀ ಹೆಚ್ಚು ಹುಡುಕಲ್ಪಟ್ಟ ಚಲನಚಿತ್ರಗಳು -

ಸ್ಪೈಡರ್ ಮ್ಯಾನ್ (ಬಾಲ ಜಾಲಿಕರ ಬಲೆ)
ಶಿವಾಜಿ (ರಜನೀ ವಿಸ್ಮಯ)
ಧೂಮ್ 2 (ಹೃತಿಕ್, ಐಶ್ವರ್ಯ ಪೋಟಾಪೋಟಿ)
ಓಂ ಶಾಂತಿ ಓಂ (ಬಾಡಿ ಬಿಲ್ಡರ್ ಶಾರುಕ್ ಮಹಿಮೆ)
ಚಕ್ ದೇ ಇಂಡಿಯಾ (ಶಾರುಕ್ ಕೂಗಿಗೆ ಎಚ್ಚೆತ್ತ ಇಂಡಿಯಾ)
ಸಾವರಿಯಾ (ಓಂ ಶಾಂತಿ ಓಂ ಜೊತೆಗೆ ತೂರಿಬಂದ ಪುಷ್ಪ)
ಹ್ಯಾರಿ ಪಾಟರ್ (ಮಕ್ಕಳ ಜಾದೂಗಾರ)
ಗೋಸ್ಟ್ ರೈಡರ್ (ಚಿತ್ರ ವಿಚಿತ್ರ ಚಿತ್ರಗಳಿಗಾಗಿ ಪೈಪೋಟಿ ಇರಬಹುದು)
ಭೂಲ್ ಭುಲೈಯಾ (ಆಪ್ತ ಮಿತ್ರ ಚಿತ್ರದಂತೆ ಇದೂ ಮಲಯಾಳಂನಿಂದ ಹಿಂದಿಗೆ ರೀಮೇಕ್ ಆದ ಚಿತ್ರ - ಗಲ್ಲಾಪೆಟ್ಟಿಗೆಯಲ್ಲಿ ಓಡದಿದ್ದರೂ
ಅಂತರ್ಜಾಲಿಗಳೊಂದಿಗೆ ಚೆನ್ನಾಗಿ ಆಟವಾಡಿದೆ)
ಜೂಂ ಬರಾಬರ್ ಜೂಂ (ಅಪ್ಪಟ ಹಿಂದಿ ಅಂತರ್ಜಾಲಿಗಳಿಗೆ ಮಾತ್ರ ಇದು ವಿಶೇಷ)

ಇಲ್ಲಿ ಮರಾಠಿ-ಕನ್ನಡ-ತಮಿಳು ಸಮ್ಮಿಶ್ರ ನಟ ಸೂಪರ್‌ಸ್ಟಾರ್ ರಜನೀಕಾಂತರ ಜನಪ್ರಿಯತೆಗೆ ಇಗೋ ಮೇಲಿದೆ ಸಾಕ್ಷಿ.


ಅಗ್ರ 10 ಸ್ಥಳಗಳ ಪಟ್ಟಿ -

ಕೇರಳ (ಸಹಜವೇ)
ಸಿಂಗಾಪುರ (ಭಾರತಕ್ಕೆ ಹತ್ತಿರವಾಗಿರುವ ಒಂದು ವಿಸ್ಮಯ ನಗರಿ)
ಗೋವಾ (ಹೇಳುವುದೇನಿದೆ?)
ಆಸ್ಟ್ರೇಲಿಯಾ
ಲಂಡನ್
ದುಬೈ (ಕೆಲಸ ಹುಡುಕುವವರ ಹಣೆಬರಹ)
ರಾಜಸ್ತಾನ
ಜೈಪುರ
ಕಾಶ್ಮೀರ
ಊಟಿ

ಇಲ್ಲಿ ನಮ್ಮ ಕರ್ನಾಟಕದ ಅಥವಾ ಇಲ್ಲಿನ ಯಾವುದೇ ಸ್ಥಳಗಳು ಜನಪ್ರಿಯವಾಗಿಲ್ಲವೆಂಬ ಅರ್ಥವೇ?

ಇನ್ನು ರಾಜಕೀಯ ವ್ಯಕ್ತಿಗಳ ಪಟ್ಟಿ -

ಮಹಾತ್ಮ ಗಾಂಧಿ
ಅಬ್ದುಲ್ ಕಲಾಂ
ಸೋನಿಯಾ ಗಾಂಧಿ
ಇಂದಿರಾ ಗಾಂಧಿ
ರವೀಂದ್ರನಾಥ ಠಾಗೋರ್
ಪ್ರತಿಭಾ ಪಾಟೀಲ್
ಸುಭಾಷ್ ಚಂದ್ರ ಬೋಸ್
ರಾಹುಲ್ ಗಾಂಧಿ
ಸರೋಜಿನಿ ನಾಯ್ಡು
ಮಾಯಾವತಿ

ಕ್ರೀಡಾಪಟುಗಳ ಪಟ್ಟಿ -

ಸಾನಿಯಾ ಮಿರ್ಜಾ
ಮಾರಿಯಾ ಶರಾಪೋವಾ
ಸಚಿನ್ ತೆಂಡೂಲ್ಕರ್
ಜಾನ್ ಸೆನಾ
ಡೇವಿಡ್ ಬೆಕೆಮ್
ಕ್ರಿಶ್ಚಿಯಾನೋ ರೊನಾಲ್ಡೋ
ರಾಹುಲ್ ದ್ರಾವಿಡ್
ಮಹೇಂದ್ರ ಸಿಂಗ್ ದೋನಿ
ಸೌರವ್ ಗಂಗೂಲಿ
ಆನಾ ಕೌರ್ನಿಕೋವಾ

ಈ ಮೇಲಿನ ಪಟ್ಟಿ ಯಾವುದೇ ಸಮೀಕ್ಷೆಯಂತೂ ಅಲ್ಲ. ಗೂಗಲ್‌ನಲ್ಲಿ ಕಂಡುಬಂದ ಸತ್ಯವಿಷಯ.