Tuesday, May 22, 2007

ಭಾಷಾಂತರ: ಒಂದು ಮೋಜು

ಹಿಂದೊಮ್ಮೆ ಕನ್ನಡಪ್ರಭದಲ್ಲಿ ಪ್ರಕಟಗೊಂಡ ಲೇಖನವೊಂದರಲ್ಲಿ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಪ್ರೊಫೆಸರ್‌ರೊಬ್ಬರ ಅನುವಾದ ಶೈಲಿಯ ಬಗ್ಗೆ ಬರೆಯಲಾಗಿತ್ತು. ಅದನ್ನು ಓದಿ ನನಗೆ ಆಶ್ಚರ್ಯವಾಗಿತ್ತು. ಭಾಷಾಂತರ ಪ್ರೊಫೆಸರ್‌ರವರ ಕತೆಯೇ ಹೀಗಾದರೆ ವಿವಿಯಿಂದ ಭಾಷೆ ವಿಷಯ ಕಲಿತು ಹೊರಬರುವ ಪದವೀಧರ ಅಥವಾ ಸ್ನಾತಕೋತರ ಪದವೀಧರರ ಕತೆ ಹೇಗಿದ್ದೀತು? ಇಂತಹ ವಿವಿಯೆಂಬ ಕಾರ್ಖಾನೆಯ ಉತ್ಪನ್ನಗಳು ಎಂತಹ ಮಟ್ಟದಲ್ಲಿವೆ ಎಂಬುದನ್ನು ತಿಳಿಸುವಂತಹ ಹಲವು ನಿದರ್ಶನಗಳು ನನಗೆ ಸಿಕ್ಕವು. ಸ್ವಾರಸ್ಯಕಾರಿ ಭಾಷಾಂತರಕಾರರ ಸ್ವಾರಸ್ಯಕರ ಭಾಷಾಂತರಗಳು ಹೇಗಿರುತ್ತವೆ ಎಂಬುದರ ಒಂದು ಸಣ್ಣ ಉದಾಹರಣೆ ಇಲ್ಲಿದೆ -

Rupee close to sub-40 levels

The rupee threatened to breach the 40 mark on Monday forcing the RBI to break its month-long hiatus and defend the dollar. Following the Chinese central bank's decision to widen the trading band of the yuan on Friday, the rupee on Monday rose to a high of 40.50 against the dollar. This is a fresh nine-year high for the local currency, which had till now risen up to 40.53 levels a couple of weeks ago.


ಉಪ-40 ಹಂತಗಳಿಗೆ ರೂಪಾಯಿ ಮುಚ್ಚಿದೆ

40 ಗುರುತನ್ನು ತರಂಗಭಂಗ ಮಾಡಲು ರೂಪಾಯಿ ಬೆದರಿಕೆ ಹಾಕಿದೆ ಸೋಮವಾರ ಆರ್ ಬಿ ಐ ಬಲವಂತಪಡಿಸಿದೆ ಅದರ ತಿಂಗಳು-ಉದ್ದ ಲೋಪವನ್ನು ಮುರಿದಿದೆ ಮತ್ತು ಡಾಲರನ್ನು ರಕ್ಷಿಸಿದೆ. ಚೈನೀಸ್ ಕೇಂದ್ರೀಯ ಬ್ಯಾಂಕನ್ನು ಅನುಸರಿಸಿ ಶುಕ್ರವಾರದ ಮೇಲೆ ಯುವಾನಿನ ವ್ಯಾಪಾರ ಮಾಡುವ ಬ್ಯಾಂಡು ಅಗಲ ಮಾಡಲು ನಿರ್ಧಾರ ಮಾಡಿದೆ, ಸೋಮವಾರ ಗುಲಾಬಿಯಲ್ಲಿರುವ ರೂಪಾಯಿಯು ಡಾಲರಿಗೆ ವಿರುದ್ಧವಾಗಿ 40.50 ಎತ್ತರವಾಗಿದೆ. ಇದು ಸ್ಥಳೀಯ ಕರೆನ್ಸಿಗಾಗಿ ತಾಜಾ ಒಂಬತ್ತು-ವರ್ಷ ಎತ್ತರವಾಗಿದೆ, ಅಗೋ ವಾರಗಳ ಜೋಡಿಯಾಗಿ 40.53 ಹಂತಗಳಿಗೆ ಅದು ಈಗ ಮೇಲಕ್ಕೇರಿದೆ.
---

ನಿಮಗೆ ತಮಾಷೆ ಎನಿಸಬಹುದು. ನನಗೂ ಇದನ್ನು ಬರೆಯುವಾಗ ತಮಾಷೆಯೆನಿಸಿತ್ತು. ಆದರೆ ಇದು ತಮಾಷೆಯಲ್ಲ. ಈ ರೀತಿಯಲ್ಲಿ ಭಾಷಾಂತರ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಮೇಲೆ ನೀಡಿರುವ ಉದಾಹರಣೆಯು ಯಾರೋ ಬರೆದದ್ದಲ್ಲ. ನಾನು ನಿಘಂಟು ಹಿಡಿದುಕೊಂಡು ಕಷ್ಟಪಟ್ಟು ಬರೆದ ಭಾಷಾಂತರ ಇದು. ಆದರೆ ತಾಜಾ ಭಾಷಾಂತರಕಾರರು ಇದನ್ನು ಸುಲಭವಾಗಿ ಬರೆದು ಮುಗಿಸುತ್ತಾರೆಂಬ ಅಂಶ ನನಗೆ ಕಷ್ಟ ಕೊಡುತ್ತದೆ. ಈ ರೀತಿಯ ಭಾಷಾಂತರಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದು, ಭಾಷಾಂತರಕಾರರಿಗೆ ಆಂಗ್ಲ ಭಾಷೆಯ ಕನಿಷ್ಠಜ್ಞಾನ ಕೂಡ ಇಲ್ಲದಿರುವುದು, ಹಾಗೂ ಎರಡು, ಕನ್ನಡ ಭಾಷೆಯಲ್ಲಿ ಅವರಿಗಿರುವ ಅಲ್ಪಜ್ಞಾನ. ಇವಲ್ಲದೇ ಮತ್ತೂ ಒಂದು ಮುಖ್ಯ ಕಾರಣವಿದೆ. ಅದು ಭಾಷಾಂತರಕಾರಿಗೆ ಇರುವ ವಿಷಯ ಜ್ಞಾನದ ಕೊರತೆ.

ನಿಘಂಟು ಹಿಡಿದು ಅದರ ಪ್ರಕಾರ ಅನುವಾದ ಮಾಡುವವರ ಸಂಖ್ಯೆ ಬಹಳಷ್ಟು. ನಿಘಂಟು ನೋಡುವುದು ತಪ್ಪಲ್ಲ. ಒಂದು ಆಂಗ್ಲ ಪದ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿ ಅರ್ಥ ನೀಡಬಹುದು. ಆದರೆ ಇವರ ಕಣ್ಣಿಗೆ ನಿಘಂಟಿನ ಅರ್ಥ ಮಾತ್ರವೇ ಗೋಚರವಾಗುತ್ತದೆ, ಸಾಂದರ್ಭಿಕತೆ ಮರೆತುಹೋಗುತ್ತದೆ.