Wednesday, April 05, 2006

ಕೃತಕ ಅಂಗಾಂಗಕ್ಕೆ ತೀವ್ರ ಪ್ರತಿಕ್ರಿಯೆ

(ಪ್ರಯೋಗ ಶಾಲೆಯ ಗಾಜಿನ ತಟ್ಟೆಯಲ್ಲಿ ಬೆಳೆದ "ಮಾನವನ ಅಸಲಿ ಮೂತ್ರಕೋಶ ಬ್ಲಾಡರ್")

ವ್ಯಕ್ತಿಯೊಬ್ಬನ ಜೀವಕೋಶದಿಂದಲೇ ಕೃತಕ ಅಂಗಾಂಗ ಸೃಷ್ಟಿಸಲು ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಬಾಪ್ ರೇ.... ವಾರೆ ವಾಹ್.... ಒಂದೆಡೆ ಇದು ಎಂಥ ಕಲಿಗಾಲವಯ್ಯ ಎಂದು "ಸಂ"ಪ್ರದಾಯಿಗಳು ಗೋಗರೆಯುತ್ತಿದ್ದರೆ, ಮತ್ತೊಂದೆಡೆ 'ವಿ'ಜ್ಞಾನಿಗಳು ತಮಗೆ "ಕಲಿ"ಗಾಲ ಬಂದಿತೆಂದು ಎದೆಯುಬ್ಬಿಸುತ್ತಿದ್ದಾರಂತೆ.

ಸವಾಲು: ಮಾನವ ಅಂಗದಿಂದಲೇ ಮತ್ತೊಂದು ಅಂಗವನ್ನೇನೊ ನೀವು ಸೃಷ್ಟಿಸಿಬಿಟ್ಟಿದ್ದೀರಿ. ಆದರೆ ಆತ್ಮವನ್ನು ನಕಲಿಸಲು ನಿಮಗೆ ಸಾಧ್ಯವೇ? ಎಂದು ಅಖಿಲ ಆತ್ಮ ಸಂತಾಪ ಸಂಘವು ವಿಜ್ಞಾನಿಗಳಿಗೆ ಸವಾಲೆಸೆದಿದೆ.

ಸವಾಲು ಸ್ವೀಕರಿಸಿದ 'ವಿ'ಕಾರ ಜ್ಞಾನಿಯೊಬ್ಬ ಆತ್ಮ ವಿನಾಶಕ್ಕೆ ಸಜ್ಜಾಗಿದ್ದಾನೆಂಬ ವರದಿಯೊಂದು ವಿಶ್ವದ ಮೂಲೆಯೊಂದರಿಂದ ಬಂದಿದೆ.

ಅಂಗ ಪಕ್ಷಗಳ ಸಂಘದ ಅಳಲು: ತಮ್ಮ ದೇಹದ ಅಂಗಾಂಗ ಮಾರಾಟ ಮಾಡಿ ಬದುಕುತ್ತಿದ್ದವರ ಹೊಟ್ಟಗೆ ಈ ಸಂಶೋಧನೆಯು ಸಂಚಕಾರ ಉಂಟುಮಾಡಲಿದೆ ಎಂದು ಅಂಗ ಪಕ್ಷಗಳ ಸಂಘದ ಅಧ್ಯಕ್ಷ ಅಂಗಮೇಶ ಅವರು ತೀವ್ರವಾಗಿ ವಿಷಾದಿಸಿದ್ದಾರೆ.

ದೇಹ ವ್ಯಾಪಾರಿಗಳ ಸಂಘದ ಪ್ರತಿಕ್ರಿಯೆ: ಕೃತಕ ಅಂಗ ಸೃಷ್ಟಿಯಿಂದ ತಮ್ಮ ವ್ಯಾಪಾರಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ ಎಂದು ಲೈಂಗಿಕ ಅಂಗನೆಯರ ಸಂಘದ ಅಧ್ಯಕ್ಷೆ ಗುಪ್ತಾಂಗನೆ ಅವರು ಸ್ಪಷ್ಟಪಡಿಸಿದ್ದಾರೆ.

ಡಾಕುಟರ ಸಂಘ: ಕಿಡ್ನಿ ಮಾರಾಟದಿಂದ ಬದುಕು ಸಾಗಿಸುತ್ತಿದ್ದ 'ಡಾಕು'ಟರರಿಗೆ ಹೊಸ ಸಂಶೋಧನೆಯು ಧಕ್ಕೆ ನೀಡಬಹುದಾದರೂ, ನೂತನ ಮಾರ್ಗಗಳ ಮೂಲಕ ಮೊದಲಿಗಿಂತ ಹೆಚ್ಚು ವ್ಯಾಪಾರ ಸೃಷ್ಟಿಸಲು ಕಷ್ಟಕರವೇನೂ ಇಲ್ಲ ಎಂದು ಡಾಕು ಡಂಕಾಸುರ್ ಅವರು ಡಾಕು ಸಹೋದ್ಯೋಗಿಗಳಿಗೆ ಸಮಜಾಯಿಷಿ ನೀಡಿದ್ದಾರೆ.

3 Comments:

Blogger Anveshi said...

ಅಲ್ಲಾ ಕನ್ನಡ ಸಾರಥಿಯವರೆ,
ಮನುಷ್ಯರ ಇಡೀ ದೇಹವನ್ನೇ ಮರು ಸೃಷ್ಟಿ ಮಾಡುವ ಸಾಧ್ಯತೆಗಳಿರುವ (ತದ್ರೂಪಿ ಸೃಷ್ಟಿ) ಈ ಯುಗದಲ್ಲಿ, ಮಾನವನ ಒಂದೊಂದೇ ಅಂಗ ಸೃಷ್ಟಿಸುವ ಕೆಲಸ ಸಂಕೀರ್ಣವಾದುದಾದರೂ, ಕಿಡ್ನಿ ತೆಗೆದು ಮೆದುಳಿನ ಜಾಗಕ್ಕೆ, ಮೆದುಳು ತೆಗೆದು ಗುಪ್ತ ಜಾಗಕ್ಕೆ.... ಮುಂತಾದ ಹಲವು ಸಾಧ್ಯತೆಗಳನ್ನು ಎಕ್ಸ್ ಪ್ಲೋರ್ ಮಾಡಿ ನೋಡಬಹುದಲ್ಲ.... ಹೊಸದೊಂದು ಮಾನವ ತಳಿ ಸೃಷ್ಟಿಯಾಗಬಹುದಲ್ಲ....!
ನಂಗಂತೂ ನಿಮ್ಮ ಬ್ಲಾಗ್ ಓದಿದ ಮೇಲೆ ನಿಮ್ಮ ಮೇಲೇ ಡೌಟ್ರೀ.... ಕೊಂಚ ಹುಷಾರಾಗಿರ್ರೀ...!

1:31 PM  
Blogger Sarathy said...

ಎಚ್ಚರಿಸಿದ್ದಕ್ಕೆ ಧನ್ಯವಾದಗಳು punಡಿತರೇ. ಯಾವುದಕ್ಕೆ ಎಚ್ಚರವಾಗಬೇಕೆಂದು ತಿಳೀತಿಲ್ರೀ, ಅಂದ್ರೆ ನಿಮ್ಮ ಡೌಟೇ ನಂಗಿನ್ನೂ ಅರ್ಥವಾಗ್ಲಿಲ್ರೀ. ಅಂಗ ಸ್ಥಾನಪಲ್ಲಟ ಮಾತ್ರವಷ್ಟೇ ಅರ್ಥವಾಗಿದ್ದು. ಬಹುಶಃ ಅದೇ ಇರಬೇಕು punಡಿತರ ಸಂತತಿಗೆ ಮೂಲ ಎಳೆ.

4:39 PM  
Blogger Unknown said...

ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com

4:48 AM  

Post a Comment

<< Home