ಲಿಂಗುಸ್ವಾಮಿಯ ಭೀಮನೂ ಭಟ್ಟರ ಗಾಳಿಪಟವೂ...
ನಮ್ಮ ಹಲವಾರು ಮಂದಿಯ ಬಹುನಿರೀಕ್ಷೆಯ ಚಿತ್ರ 'ಗಾಳಿಪಟ'. ಭರ್ಜರಿ ಯಶಸ್ವಿ 'ಮುಂಗಾರು ಮಳೆ' ಚಿತ್ರದ ರೂವಾರಿಗಳಾದ ನಿರ್ದೇಶಕ ಯೋಗರಾಜ್ ಭಟ್ ಮತ್ತು ಆ ಚಿತ್ರದ ಹೀರೋ ಗಣೇಶ್ ಮತ್ತೊಮ್ಮೆ ಬೆರೆತ ಚಿತ್ರ ಗಾಳಿಪಟ. ಅದರ ನಿರ್ಮಾಪಕರು ತಮಿಳಿನ ಘಟಾನುಘಟಿ ಎ.ಎಂ.ರತ್ನಂ. ಚಿತ್ರ ಪೂರ ಮಲೆನಾಡಿನ ನಿಸರ್ಗ ಸೌಂದರ್ಯದ ರಮಣೀಯ ಹಿನ್ನೆಲೆ. ಇಷ್ಟು ಸಾಕಲ್ಲವೇ ಒಂದು ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇರಿಸಿಕೊಳ್ಳಲು?
ಚೆನ್ನೈನಲ್ಲಿರುವ ನಮಗೆ 'ಗಾಳಿಪಟ' ಮೊದಲ ಬಾರಿಗೇ ನಿರಾಸೆ ತಂದಿತ್ತು. ಇಲ್ಲಿನ ಕ್ಯಾಸಿನೋ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತದೆಂದು ಮೂರು ವಾರಗಳ ಹಿಂದಿನಿಂದಲೇ ಪೇಪರಿನಲ್ಲಿ ಜಾಹೀರಾತು ಬರುತ್ತಿತ್ತು. ಬಿಡುಗಡೆ ದಿನ ಬಂದರೂ ಚೆನ್ನೈನಲ್ಲಿ ಎಲ್ಲಿಯೂ 'ಗಾಳಿಪಟ' ಹಾರಾಡಲಿಲ್ಲ. ಅಂತೂ ಬೆಂಗಳೂರಿಗೇ ದೌಡಾಯಿಸಿ ಚಿತ್ರವನ್ನು ನೋಡಬೇಕಾಯಿತು. ಚಿತ್ರಮಂದಿರದೊಳಗೆ ಆಗುತ್ತಿದ್ದ ಪ್ರೇಕ್ಷಕರ ಕಲರವ, ಉತ್ಸಾಹಗಳನ್ನು ಕಂಡು ಮನಸಿನೊಳಗೆ ಚಿತ್ರದ ಬಗ್ಗೆ ನೂರಾರು ಗಾಳಿಪಟಗಳು ಹಾರತೊಡಗಿದ್ದವು. ಚಿತ್ರ ಆರಂಭಗೊಂಡು ಒಂದೊಂದೇ ಸನ್ನಿವೇಶಗಳು ಸಂದುಹೋಗುತ್ತಿರುವಂತೆಯೇ ಮನಸಿನೊಳಗೆ ಹಾರಾಡುತ್ತಿದ್ದ ಗಾಳಿಪಟಗಳು ಒಂದೊಂದಾಗಿ ಕಿತ್ತುಹೋಗಿ ಶೂನ್ಯ ಸೇರಿಕೊಂಡವು. ಯೋಗರಾಜ್ ಭಟ್ಟರು 'ಮುಂಗಾರು ಮಳೆ' ಪ್ರಭಾ ವಲಯದಿಂದ ಹೊರಬರದೆ ಗಾಳಿಪಟ ಹಾರಿಸಿದರೆಯೇ? ಅಥವಾ ನನ್ನಂತಹ ಜನರು 'ಮುಂಗಾರು ಮಳೆ' ಯನ್ನು ಮನಸ್ಸಿನಿಂದ ಕಿತ್ತುಹಾಕದೆ ಗಾಳಿಪಟ ನೋಡಿದೆವೆಯೇ? ಆ 'ಮುಂಗಾರು ಮಳೆ' ಯಲ್ಲಿ ಸುರಿದಿದ್ದ ಸಂಭಾಷಣೆಗಳ ಮಳೆಯು ಹಿತಕರವಾಗಿದ್ದರೆ, 'ಗಾಳಿಪಟ'ದಲ್ಲಿ ಆಡಿಸಿದ್ದ ಸಂಭಾಷಣೆಗಳು ಶೀತ, ನೆಗಡಿ ತಂದವು.
ಯೋಗರಾಜ್ ಭಟ್ಟರಿಗೆ ಏನಾಯಿತು? 'ಮುಂಗಾರು ಮಳೆ' ಚಿತ್ರದ ಅಪೂರ್ವ ಗೆಲುವಿಗೆ ಯಾವ ಅಂಶ ಕಾರಣವಾಯಿತು ಎಂಬುದು ಈಗಲೂ ನನಗೆ ಅರ್ಥವಾಗುತ್ತಿಲ್ಲವೆಂದು ಯೋಗರಾಜ್ ಭಟ್ಟರು ಒಮ್ಮೆ ಹೇಳಿದ್ದರು. ಅದೇ ಗೊಂದಲ, ಜಿಜ್ಞಾಸೆಯಲ್ಲಿ ಭಟ್ಟರು ಆ ಚಿತ್ರದ ಯಶಸ್ವಿಗೆ ಯಾವ್ಯಾವ ಅಂಶಗಳು ಕಾರಣವಾದವೋ ಅವನ್ನೆಲ್ಲಾ ಗಾಳಿಪಟಕ್ಕೆ ಬಲವಂತವಾಗಿ ತೂರಿದಂತೆ ಕಾಣುತ್ತದೆ. ಮುಂಮಳೆಯಲ್ಲಿ ಸಂಭಾಷಣೆಗಳು ಸಾಂದರ್ಭಿಕವಾಗಿ ತಕ್ಕುವಾಗಿದ್ದು ಅದರ ಯಶಸ್ವಿಯಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಈ ಅಂಶ ಅರಿತ ಯೋಗರಾಜ್ ಭಟ್ಟರು ಗಾಳಿಪಟಕ್ಕೆ ಸಂಭಾಷಣೆಗಳ ಮಳೆಯನ್ನೇ ಸುರಿಸುತ್ತಾರೆ. 'ಮುಂಮ'ದ ಸಂಭಾಷಣೆಗಳನ್ನೇ ಜಗ್ಗಿ ಜಗ್ಗಿ ಎಳೆದು ಗಾಳಿಪಟದ ಸೂತ್ರ ಕಿತ್ತುಬರುವಂತೆ ಮಾಡುತ್ತಾರೆ. ಅಲ್ಲಿಯೇ ಗಾಳಿಪಟ ಗೋತಾ ಹೊಡೆಯಲು ಆರಂಭವಾಗುವುದು. ಡಯಲಾಗ್‌ಗಳನ್ನು ಎಷ್ಟು ಬೇಕೊ ಅಷ್ಟು ಇಟ್ಟುಕೊಂಡಿದ್ದರೆ ಬಹುಶಃ ಗಾಳಿಪಟ ಒಂದು ಪಕ್ಕಾ ಮಕ್ಕಳ ಆಟವಾಗುತ್ತಿತ್ತೇನೊ (ಅಂದರೆ ಮನರಂಜಕವಾಗುತ್ತಿತ್ತು).
'ರಂಗ ಎಸ್ಎಸ್ಎಲ್‌ಸಿ' ಮತ್ತು 'ಮಣಿ' ಚಿತ್ರಗಳೆರಡು ಚೆನ್ನಾಗಿದ್ದೂ ನೆಲಕಚ್ಚಿದಾಗ ನಾನು ಭಯದಿಂದಲೇ 'ಮುಂಗಾರು ಮಳೆ' ಮಾಡಿದೆ. ಅದೇನೋ ಯಶಸ್ವಿಯಾಯಿತು. ಈಗ ಆ ಯಶಸ್ವಿಯನ್ನು ಬೆನ್ನಿಗೆ ಹಾಕಿಕೊಂಡು ಭಯದಿಂದಲೇ 'ಗಾಳಿಪಟ' ಮಾಡಿದ್ದೇನೆ ಎಂದು ಯೋಗರಾಜ್ ಭಟ್ಟರು ಗಾಳಿಪಟ ಹಾರಿಸುವ ಮುನ್ನ ಹೇಳಿಕೊಂಡಿದ್ದರು. ಗಾಳಿಪಟ ಗೋತಾ ಹೊಡೆಯಲು ಈ ಭಯವೇ ಕಾರಣವಾಯಿತೆ? ಈ ಭಯ ಎಂಬ ಪದ ಕೇಳಿದಾಗ ನನಗೆ ತಮಿಳಿನ ಲಿಂಗುಸ್ವಾಮಿ ಎಂಬ ನಿರ್ದೇಶಕ ನೆನಪಿಗೆ ಬರುತ್ತಾರೆ.
'ಗಾಳಿಪಟ' ಚಿತ್ರದ ನಿರ್ಮಾಪಕರೇ ಆದ ಎ.ಎಂ.ರತ್ನಂ ಅವರ ನಿರ್ಮಾಣದಲ್ಲಿ ವಿಕ್ರಮ್ ಎಂಬ ದೊಡ್ಡ ನಾಯಕನಟನಿರುವ 'ಭೀಮಾ' ಎಂಬ ಚಿತ್ರದ ನಿರ್ದೇಶಕ ಈ ಲಿಂಗುಸ್ವಾಮಿ. 'ಸಂಡೈಕೋಳಿ' ಯಂತಹ ಕೆಲವು ಅಮೋಘ ಚಿತ್ರಗಳನ್ನು ನಿರ್ದೇಶಿಸಿದ ಅಪ್ರತಿಮ ಪ್ರತಿಭಾವಂತ ನಿರ್ದೇಶಕ, ಸಂಭಾಷಣೆಕಾರ. ಇಂತಹ ವ್ಯಕ್ತಿಯು ಟಿವಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಭಯದ ಬಗ್ಗೆ ಪ್ರಸ್ತಾಪ ನಡೆಸಿದರು. 'ಭೀಮಾ' ಚಿತ್ರ ನಿರ್ಮಾಣವಾಗಲು ತಗುಲಿದ ಸುಮಾರು ಒಂದೂವರೆ ವರ್ಷಗಳಲ್ಲಿ ಪ್ರತಿಯೊಂದು ದಿನವನ್ನೂ ನಾನು ಭಯದಲ್ಲೇ ಕಳೆಯುತ್ತಿದ್ದೆ. ಕುಂತರೂ, ನಿಂತರೂ ನನಗೆ ಭೀಮನೇ ಕಣ್ಣಿಗೆ ಬರುತ್ತಿತ್ತು. ನೆಂಟರ ಮನೆಗಳಿಗೆ ಹೋಗಿ ಸಮಯ ಸವೆಸಿದರೆ ನಾನೆಲ್ಲಿ ಭೀಮನಿಗೆ ಅನ್ಯಾಯ ಮಾಡುತ್ತಿದ್ದೇನೆಯೋ ಎಂಬಂತಹ ಭಯದ ಭಾವನೆಗಳು ಉಂಟಾಗುತ್ತಿದ್ದುವು ಎಂದು ಲಿಂಗುಸ್ವಾಮಿ ಮನಸ್ಸು ಬಿಚ್ಚಿಕೊಂಡಿದ್ದರು. ಅಂತಹ 'ಭೀಮಾ' ಚಿತ್ರ ಇದೀಗ ಸಂಕ್ರಾಂತಿಯಲ್ಲಿ (ಅಂದರೆ ಪೊಂಗಲ್) ಬಿಡುಗಡೆಯಾಯಿತು. ವಿಶಿಷ್ಟ ಕಥಾವಸ್ತು, ವೇಗಭರಿತ ನಿರೂಪಣೆಯ ಚಾಕಚಕ್ಯತೆ ಹೊಂದಿರುವ ಪಕ್ಕಾ ಕಮರ್ಷಿಯಲ್ ನಿರ್ದೇಶಕ ಲಿಂಗುಸ್ವಾಮಿ ಅವರು 'ಭೀಮಾ' ಚಿತ್ರದಲ್ಲಿ ಎಡವಿದರು. ಯೋಗರಾಜ್ ಭಟ್ಟರು 'ಗಾಳಿಪಟ'ದಲ್ಲಿ ಸಂಭಾಷಣೆಗಳ ಬಾಲ ಹಿಡಿದರೆ, ಲಿಂಗುಸ್ವಾಮಿಯವರು 'ಭೀಮಾ'ದಲ್ಲಿ ಹೊಡೆದಾಟಗಳ ಹಾದಿಹಿಡಿದರು. ಹೀಗಾಗಿ ಸಂಭಾಷಣೆಗಳಿಂದಾಗಿ ಗಾಳಿಪಟದ ಬಾಲಂಗೋಚಿ ಕಿತ್ತುಹೋಯಿತು; ಹೊಡೆದಾಟಗಳಿಂದಾಗಿ ಭೀಮಾ ಶಕ್ತಿ ಕುಂದಿಹೋಯಿತು. ಹಾಗಿದ್ದರೆ ಯೋಗರಾಜ್ ಭಟ್ಟರು ಮತ್ತು ಲಿಂಗುಸ್ವಾಮಿಯವರು ಸೋಲಲು ಕಾರಣ ಅವರ ಮನಸ್ಸಿನೊಳಗೆ ಆವರಿಸಿದ್ದ ಭಯವೇ?
ತುಣುಕು ಅನುಮಾನ: ಯೋಗರಾಜ್ ಭಟ್ಟರು ಮತ್ತೊಬ್ಬ ಉಪೇಂದ್ರ ಆಗಲಿದ್ದಾರೆಯೇ? ಉಪೇಂದ್ರ ಅವರು 'ಶ್', 'ಓಂ' ಮತ್ತು 'ಎ' ಚಿತ್ರಗಳನ್ನು ನಿರ್ದೇಶಿಸಿದಾಗ ಅವರೊಬ್ಬ ವಿಶಿಷ್ಟ ಹಾಗೂ ಸೃಜನಶೀಲ ನಿರ್ದೇಶಕ ಎಂದು ಹೆಸರು ಪಡೆದರು. ಆನಂತರ 'ಉಪೇಂದ್ರ' ಚಿತ್ರ ಮಾಡಿದರು. ಚಿತ್ರವೇನೋ ಭರ್ಜರಿ ಯಶಸ್ವಿಯಾಯಿತಾದರೂ ಎಲ್ಲೋ ಒಂದು ಕಡೆ ಉಪೇಂದ್ರರವರು ಸೃಜನಶೀಲತೆ ಕಳೆದುಕೊಂಡರೇನೋ ಎಂಬಂತೆ ಭಾಸವಾಯಿತು. 'ಆಪರೇಷನ್ ಅಂತ' ಬಂದ ನಂತರ ಇದು ಬಹುತೇಕ ಖಚಿತವಾಯಿತು. ಈಗ ಉಪೇಂದ್ರ ಅವರು ನಿರ್ದೇಶನದ ಗೊಡವೆಯೇ ಬಿಟ್ಟು ಮೈ ಬೆಳೆಸಿಕೊಂಡು ಹೀರೋ ಆಗಿಬಿಟ್ಟಿದ್ದಾರೆ. ಯೋಗರಾಜ್ ಭಟ್ಟರು ಉಪೇಂದ್ರರಂತೆಯೇ ಎಲ್ಲೋ ಸೃಜನಶೀಲತೆ ಕಳೆದುಕೊಳ್ಳುತ್ತಿದ್ದಾರೇನೋ ಎಂಬ ಸಣ್ಣ ಭಯ ನಮಗೆ ಕಾಡುತ್ತದೆ.

Labels: Cinema, Entertainment